ಅಬ್ದುಲ್ ಖಾದರ್
	ಆಲ್ಜೀರಿಯದ ಪ್ರಜಾಮುಖಂಡ (1808-1883). ವಿದ್ವಾಂಸ, ದೇಶಪ್ರೇಮಿ, ಅರಬ್ಬೀ ಮನೆತನವೊಂದರಲ್ಲಿ ಹುಟ್ಟಿ, ತಂದೆಯ ಮರಣಾನಂತರ ನಾಡಿನ ತುರ್ಕಿ ಪಂಗಡದ ವಿರೋಧಪಕ್ಷದ ಮುಖಂಡನಾಗಿ ಮಸ್ಕರದ ಅಮೀರನಾದ. 1832ರಿಂದ ಏಳು ವರ್ಷ ಕಾಲ ಉತ್ತರ ಆಲ್ಜೀರಿಯದ ಅನೇಕ ಪ್ರಾಂತ್ಯಗಳನ್ನು ತನ್ನ ಹತೋಟಿಗೆ ತಂದುಕೊಂಡ. ಸಮರ್ಥಯೋಧನೂ ಆಗಿದ್ದು 1839ರಲ್ಲಿ ನಾಡಿನ ಸ್ವಾತಂತ್ರ್ಯಕ್ಕಾಗಿ ಫ್ರೆಂಚರ ಮೇಲೆ ಯುದ್ಧ ಘೋಷಿಸಿ ಎಂಟು ವರ್ಷ ಕಾಲ ಹೋರಾಡಿದ. ದುರದೃಷ್ಟದಿಂದ ಸೋತು, ಸೆರೆಸಿಕ್ಕಿ 1847ರಿಂದ್ 1852ರವರೆಗೆ ಫ್ರಾನ್ಸಿನಲ್ಲಿ ಕಾರಾಗೃಹ ವಾಸವನ್ನನುಭವಿಸಿದ. ಡಮಾಸ್ಕಸ್‍ನಲ್ಲಿ ಚಿತ್ರಹಿಂಸೆಗೊಳಗಾಗಿದ್ದ ಕ್ರೈಸ್ತರಿಗೆ ನೆರವು ನೀಡಿದ್ದಕ್ಕಾಗಿ ಅವನಿಗೆ 1860ರಲ್ಲಿ ಫ್ರೆಂಚ್ ಸರಕಾರ ಲೀಜನ್ ಆಫ್ ಆನರ್ ಪ್ರಶಸ್ತಿಯನ್ನು ನೀಡಿತು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ